ಪ್ರಾಂಶುಪಾಲರ ಮಾತು




ಒಂದು ಕಾಲೇಜಿಗೆ ಕೇವಲ ಕಟ್ಟಡ ಮತ್ತು ಉತ್ತಮ ಮೂಲಭೂತ ಸೌಕರ್ಯಗಳಿದ್ದರೆ ಸಾಲದು, ಇವುಗಳ ಸದುಪಯೋಗದಿಂದ, ವಿದ್ಯಾರ್ಥಿಯು ಸರ್ವಂಗೀಣ ಬೆಳವಣಿಗೆಗೊಂಡು ಸಭ್ಯ ನಾಗರೀಕನಾಗಿ ಬಾಳಬೇಕೆಂಬ ಧ್ಯೇಯ ಮಂತ್ರದೊಂದಿಗೆ ಶ್ರೀ ಮಹಾವೀರ ಕಾಲೇಜು ಹಗಲಿರುಳು ಶ್ರಮಿಸುತ್ತಿದೆ. ಗ್ರಾಮೀಣ ಭಾಗದ ಜನತೆಗೆ ಉನ್ನತ ಶಿಕ್ಷಣವನ್ನು ನೀಡಬೇಕೆನ್ನುವ ದೃಢನಿಲುವಿನೊಂದಿಗೆ 1965ರಲ್ಲಿ ಶ್ರೀ ಮಹಾವೀರ ಕಾಲೇಜು ಸ್ಥಾಪನೆಗೊಂಡಿತು. ಈ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದು ಹೊಸ್ತಿಲನ್ನು ದಾಟಿದ ಸಾವಿರಾರು ವಿದ್ಯಾರ್ಥಿಗಳು ಮನಗಂಡಂತೆ, ಈ ಸಂಸ್ಥೆಯು ಎಲ್ಲಾ ರೀತಿಯ ವಾಣಿಜ್ಯ ಸಿದ್ಧಾಂತಗಳಿಂದ ದೂರವಿದ್ದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕಾರ್ಯವೆಸಗುತ್ತಿದೆ.

ಶ್ರೀ ಮಹಾವೀರ ಕಾಲೇಜು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಅತ್ಯಂತ ಕಡಿಮೆ ದರದಲ್ಲಿ ನೀಡುತ್ತಿದೆ. ಶಿಕ್ಷಣದ ಗುಣಮಟ್ಟಕ್ಕೆ ಸಂಬಂಧಿಸಿದಂತೆ, ಯಾವುದೇ ರೀತಿಯ ರಾಜಿಯನ್ನೂ ಮಾಡಿಕೊಳ್ಳುವುದಿಲ್ಲ. ನ್ಯಾಕ್ ಸಂಸ್ಥೆಯಿಂದ ಶ್ರೇಷ್ಠ ಮಟ್ಟದ 'ಎ' ಶ್ರೇಣಿಯನ್ನು ಪಡೆದಿರುವುದೇ ಇದಕ್ಕೆ ಸಾಕ್ಷಿ. ಗುಣಮಟ್ಟದ ಉನ್ನತ ಶಿಕ್ಷಣವು ಯುವ ಜನತೆಯಲ್ಲಿ ಉತ್ಸಾಹವನ್ನು ತುಂಬಬಲ್ಲದು. ಸಮಾಜಕೋಸ್ಕರ ಪ್ರಾರಂಭಿಸಲ್ಪಟ್ಟ ಈ ಸಂಸ್ಥೆಯನ್ನು ಇನ್ನೂ ಉತ್ತುಂಗ ಶಿಖರಕ್ಕೇರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಸಹಸ್ರ ಸಂಖ್ಯೆಯಲ್ಲಿ, ಶ್ರೀ ಮಹಾವೀರ ಕಾಲೇಜಿನ ಶ್ರೀಮಂತ ಪರಂಪರೆಯನ್ನು ಎತ್ತಿ ಹಿಡಿಯಬೇಕೆನ್ನುವುದು ನಮ್ಮ ಆಶಯ.

23 ಎಕರೆಗಳ ವಿಶಾಲವಾದ ಕ್ಯಾಂಪಸ್ ನಲ್ಲಿ ಅರಳಿ ನಿಂತಿರುವ ಈ ಕಾಲೇಜು, ಉತ್ತಮ ಗುಣಮಟ್ಟದ ಮೂಲ ಸೌಕರ್ಯಗಳು, ಕಲಿಕಾ ಸೌಲಭ್ಯಗಳು ಹಾಗೂ ಕರ್ತವ್ಯಪರ ಅನುಭವೀ ಅಧ್ಯಾಪಕ ವೃಂದವನ್ನೊಳಗೊಂಡಿದೆ. 50 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಸಮಾಜಕ್ಕೆ ಉತ್ತಮ ಸೇವೆಯನ್ನು ಸಲ್ಲಿಸಿರುವ ಮಹಾವೀರ ಕಾಲೇಜು, ಮುಂದಿನ ವರ್ಷಗಳಲ್ಲೂ ಈ ಸೇವೆಯನ್ನು ಮುಂದುವರಿಸಲು ಸಜ್ಜಾಗಿ ನಿಂತಿದೆ. ಸಂಸ್ಥೆಯನ್ನು ಉತ್ತುಂಗ ಶಿಖರಕ್ಕೇರಿಸುವ ಕೈಂಕರ್ಯದಲ್ಲಿ ತಾವೆಲ್ಲರೂ ಮುಂದೆ ಬಂದು ನಮ್ಮ ಜೊತೆ ಕೈಗೂಡಿಸಬೇಕೆನ್ನುವ ಹಾರೈಕೆ ನಮ್ಮದು.