ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆಗೆ ಸ್ವಾಗತ



ನಮ್ಮ ಧ್ಯೇಯ


ವಿದ್ಯಾಂ, ಸಶುಧಾಂ ಸಂಪ್ರಾಪ್ಯ ವಂದ್ಯಾ ಸೇವಾ ಪರೋಭವ|
ಸ್ವಾತ್ಮನ್: ಸ್ವಜನಸ್ಯಾಪಿ ಹಿತಂ ರಾಷ್ಟ್ರಸ್ಯ ವರ್ಧಯ||
ಪರಿಶುದ್ಧವಾದ ವಿದ್ಯೆಯನ್ನು ಪಡೆದು, ಜನಸೇವಾ ಪರನಾಗು
ನಿನ್ನ, ನಿನ್ನವರ ಮತ್ತು ರಾಷ್ಟ್ರದ ಹಿತವನ್ನು ವಧರ್ಿಸು


ಗ್ರಾಮೀಣ ಪರಿಸರದ ಅರ್ಹ ವಿದ್ಯಾರ್ಥಿಗಳಿಗೆ, ವಿಶ್ವವಿದ್ಯಾನಿಲಯ ಶಿಕ್ಷಣವನ್ನು ನೀಡಬೇಕೆಂಬ ಮಹದಾಸೆಯೊಂದಿಗೆ, ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಮಣಿಪಾಲ ಮತ್ತು ಶ್ರೀ ಮಹಾವೀರ ಕಾಲೇಜು ಟ್ರಸ್ಟ್ ನ ಸಹಯೋಗದೊಂದಿಗೆ 1965ರಲ್ಲಿ ಮೂಡುಬಿದಿರೆಯಲ್ಲಿ ಶ್ರೀ ಮಹಾವೀರ ಕಾಲೇಜು ಸ್ಥಾಪನೆಗೊಂಡಿತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಸ್ಥಾಪನೆಗೊಂಡಿದ್ದರೂ, ಯಾವುದೇ ಜಾತಿ-ಧರ್ಮಗಳ ಬೇಧವಿಲ್ಲದೇ, ಸಮಾಜದ ಎಲ್ಲಾ ಸ್ತರದ ವಿದ್ಯಾರ್ಥಿಗಳಿಗೂ ಪ್ರವೇಶಾತಿಯನ್ನು ಈ ಸಂಸ್ಥೆಯು ನೀಡುತ್ತಿದೆ. ದೇಶದ ಜನತೆಗೆ, ಅದರಲ್ಲೂ ಮುಖ್ಯವಾಗಿ ಸಮಾಜದ ಹಿಂದುಳಿದ ವರ್ಗ ಹಾಗೂ ಬಡಕುಟುಂಬದವರು ಅಭಿವೃದ್ಧಿ ಹೊಂದಿ, ಸುಗಮ ಜೀವನವನ್ನು ನಡೆಸಲು ಅಗತ್ಯವಿರುವ ತರಬೇತಿಯನ್ನು ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ, ಕಾಲೇಜು, ಯುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತರಬೇತಿಯನ್ನು ನೀಡಿ, ತನ್ಮೂಲಕ ಎಲ್ಲರೂ ನ್ಯಾಯ, ಪ್ರೀತಿ, ವಿಶ್ವಾಸದಿಂದ ಬದುಕಲು ಪ್ರೇರೇಪಿಸುತ್ತಿದೆ.
ಜುಲೈ 09, 1965ರಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ತರಗತಿಗಳು ಪ್ರಾರಂಭಗೊಂಡವು. ಮುಂದಿನ ದಿನಗಳಲ್ಲಿ, ಶ್ರೀ ಮಹಾವೀರ ಕಾಲೇಜು ಟ್ರಸ್ಟ್ ನ ಬೇಡಿಕೆಯಂತೆ, ಅಂದಿನ ಮೈಸೂರು ಸರಕಾರವು, ಕಾಲೇಜು ಸ್ಥಾಪನೆಗಾಗಿ ನಗರದ ಹೊರ ವಲಯದಲ್ಲಿರುವ ಕೊಡಂಗಲ್ಲು ಪರಿಸರದ 16.6 ಎಕರೆ ಶುಷ್ಕ ಭೂವಿಯನ್ನು ಮಂಜೂರು ಮಾಡಿತು. ತದ ನಂತರ ಈ ಪ್ರದೇಶದ ಸುತ್ತ ಮುತ್ತಲಿನ 3-6 ಎಕರೆ ಜಾಗವನ್ನು ಟ್ರಸ್ಟಿನಿಂದ ಖರೀದಿಸಿ, ಸ್ವಂತ ಕಾಲೇಜು ಕಟ್ಟಡವನ್ನು ಸ್ಥಾಪಿಸಲಾಯಿತು. 1965ರಲ್ಲಿ ವಾಲ್ ಚಂದ್ ಗ್ರೂಪ್ ಆಫ್ ಕಂಪನಿಯ ಶ್ರೀ ಹೀರಾಚಂದ್ ಲಾಲ್ ಚಂದ್ ರವರು ಕಟ್ಟಡದ ಶಂಕು ಸ್ಥಾಪನೆಯನ್ನು ನೆರವೇರಿಸಿದರು. ಅಂದಿನ ಮೈಸೂರು ಸರಕಾರದ ಮುಖ್ಯಮಂತ್ರಿಗಳಾದ ದಿವಂಗತ ಎಸ್. ನಿಜಲಿಂಗಪ್ಪನವರು ಜೂನ್ 26, 1966ರಂದು ನೂತನ ಕಟ್ಟಡವನ್ನು ಉದ್ಘಾಟಿಸಿದರು. ನವಂಬರ್ 08, 1968 ರಂದು ಮುಖ್ಯಕಟ್ಟಡ ಮತ್ತು ಕ್ರೀಡಾಂಗಣವು ಉದ್ಘಾಟಿಸಲ್ಪಟ್ಟಿತು.
ಭಗವಾನ್ ಶ್ರೀ ಮಹಾವೀರ ಜಯಂತಿ, ಸ್ವಾತಂತ್ರ್ಯ ದಿನಾಚರಣೆ, ಶಿಕ್ಷಕರ ದಿನಾಚರಣೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳು, ಉದ್ಯೋಗ ಮೇಳ, ಕ್ರೀಡಾ ದಿನಾಚರಣೆ, ಮಹಿಳಾ ದಿನಾಚರಣೆ, ವಿದ್ಯಾರ್ಥಿನಿಲಯಗಳ ದಿನಾಚರಣೆ, ವಾರ್ಷಿಕೋತ್ಸವ ಮೊದಲಾದ ಹಲವಾರು ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದೆ.



ನಮ್ಮ ಸಾಮರ್ಥ್ಯ


ಶ್ರೀ ಮಹಾವೀರ ಕಾಲೇಜು ಕಲಿಕೆ ಮತ್ತು ಅಭಿವೃದ್ಧಿಗೆ ಒಂದು ಕೇಂದ್ರವಾಗಿದೆ, ವರ್ಗ ಕೊಠಡಿ ಬೋಧನೆಗಳನ್ನು ಸಂಘಟಿಸುವ ಮೂಲಕ ಮಾತ್ರವಲ್ಲದೇ ಸಹ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೂ ಕೂಡ ಆಗಿವೆ.

ಜಾತಿ, ಮತ ಮತ್ತು ಧರ್ಮದ ಹೊರತಾಗಿ ದೇಶದ ಎಲ್ಲ ಭಾಗಗಳಿಂದ ಅರ್ಹ ವಿದ್ಯಾರ್ಥಿಗಳಿಗೆ ಕಾಲೇಜು ಯಾವಾಗಲೂ ತೆರೆದುಕೊಳ್ಳುತ್ತದೆ. ಮಹಿಳಾ ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಒಟ್ಟಾರೆ ಅಭಿವೃದ್ಧಿಗೆ ಪ್ರೋತ್ಸಾಹಿಸಲು ಕಾಲೇಜ್ ಬಯಸುತ್ತದೆ.